---_(@) ||||'''_(@)

ಸಾಗರವು ಕರೆಯುತಿದೆ... | ಕಾಳಗುತ್ತು

ಕಿರು ಚಿತ್ರ: ಕಾಳಗುತ್ತು
ಸಾಹಿತ್ಯ: ಕುಮಾರೇಶ್‌ ಕಣಿಯೂರು
ಗಾಯಕರು: ಲೋಕೇಶ್‌ ಚಾರ್ವಕ
_______________________
ಸಾಗರವು ಕರೆಯುತಿದೆ
ಎಲ್ಲಾ ನದಿ ನೀರು ಒಂದೊಂದೆ
ಬರುವಂತೆ ತನ್ನಲ್ಲಿಗೆ...
ಈ ಮನವು ಬಯಸುತಿದೆ
ಎಲ್ಲಾ ಸಂಬಂಧ ಒಂದಾಗಿ
ಸಿಹಿಯನ್ನ ಹಂಚೋದಕೆ...

ನಮ್ಮ ಬಾಳಲ್ಲಿ ಬೆಳಕಾಗಿ ಬಂದೆ ನೀನು
ಈ ಕಣ್ಣಲ್ಲಿ ಕನಸನ್ನ ತಂದೆ ನೀನು
ನಿನ್ನ ಆ ಸಣ್ಣ ನಗುವೊಂದೆಯೇ ಬೇಕಾಗಿದೆ...

ಈ ಪ್ರೀತಿ ಎಂದೆಂದು ನಮ್ಮೊಂದಿಗೆ
ಚಿರವಾಗಿ ನೆಲೆಯಾಗಲಿ...
ನಗುವಲ್ಲಿ ಸಿಹಿಯನ್ನ ಬೆರೆಸೋದಕೆ
ಈ ಪ್ರೀತಿ ಹಸಿರಾಗಲಿ... ||2||

ಮಾತಲ್ಲಿ ಬೆರೆತಾಗ... ತುಂಬಿದೆ ಮನವೆಲ್ಲವೂ...
ನೀ ಬಂದ... ದಿನವಿಂದು... ತಂದಿದೆ ಸಂತೋಷವು...
ನಿನ್ನ ಹೆಜ್ಜೆ ಸದ್ದು ಮನೆಯ ಒಳಗೆ ಇಂಪಾದ ಕಳೆ ತಂತು ಇಂದು
ನಮ್ಮ ಖುಷಿಯ ಒಳಗೆ ಬೆರೆತೆ ನೀನು ಸವಿಯಾದ ಸಂತೋಷ ತಂದು

ನಮ್ಮ ಬಾಳಲ್ಲಿ ಬೆಳಕಾಗಿ ಬಂದೆ ನೀನು
ಈ ಕಣ್ಣಲ್ಲಿ ಕನಸನ್ನ ತಂದೆ ನೀನು
ನಿನ್ನ ಆ ಸಣ್ಣ ನಗುವೊಂದೆಯೇ ಬೇಕಾಗಿದೆ...

ಈ ಪ್ರೀತಿ ಎಂದೆಂದು ನಮ್ಮೊಂದಿಗೆ
ಚಿರವಾಗಿ ನೆಲೆಯಾಗಲಿ...
ನಗುವಲ್ಲಿ ಸಿಹಿಯನ್ನ ಬೆರೆಸೋದಕೆ
ಈ ಪ್ರೀತಿ ಹಸಿರಾಗಲಿ...||2||

No comments:

Post a Comment